ಕಡಿಮೆ ಡೇಟಾ ಬಳಸಿ ಫೋಟೋ, ಸ್ಟೋರಿ, ಕಿರು ವೀಡಿಯೊ ಮತ್ತು ರೀಲ್ಸ್ ವೀಕ್ಷಿಸಿ ಮತ್ತು ಶೇರ್ ಮಾಡಿMeta ದಿಂದ Instagram Lite ಎಂಬುದು Instagram ನ ವೇಗವಾದ ಮತ್ತು ಚಿಕ್ಕ ಆವೃತ್ತಿಯಾಗಿದೆ. ನಿಧಾನಗತಿಯ ನೆಟ್‌ವರ್ಕ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿರ್ಮಿಸಲಾಗಿದೆ, ಕಡಿಮೆ ಮೊಬೈಲ್ ಡೇಟಾ ಬಳಸುತ್ತದೆ ಮತ್ತು ನಿಮ್ಮ ಫೋನ್‌ನಲ್ಲಿ ಕಡಿಮೆ ಸಂಗ್ರಹಣೆ ಸ್ಥಳವನ್ನು ತೆಗೆದುಕೊಳ್ಳುತ್ತದೆ, Instagram Lite ನೀವು ಪ್ರೀತಿಸುವ ಜನರು ಮತ್ತು ವಿಷಯಗಳ ಬಳಿಗೆ ನಿಮ್ಮನ್ನು ತರುವುದನ್ನು ಸುಲಭಗೊಳಿಸುತ್ತದೆ. ಸೃಜನಶೀಲ ಕ್ಷಣಗಳಲ್ಲಿ ನಿಮ್ಮನ್ನು ವ್ಯಕ್ತಪಡಿಸಿ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಿ.
• ನೀವು ಇಷ್ಟಪಡುವ ಸ್ನೇಹಿತರು ಮತ್ತು ರಚನೆಕಾರರ ಚಿತ್ರಗಳು, ವೀಡಿಯೊಗಳು ಮತ್ತು ಸೋರಿಗಳನ್ನು ವೀಕ್ಷಿಸಿ
ನಿಮ್ಮ ಸ್ನೇಹಿತರು, ಮೆಚ್ಚಿನ ಕಲಾವಿದರು, ಬ್ರ್ಯಾಂಡ್‌ಗಳು ಮತ್ತು ರಚನೆಕಾರರು ನಿಮ್ಮ ಫೀಡ್‌ನಲ್ಲಿ ಏನನ್ನು ಶೇರ್ ಮಾಡುತ್ತಿದ್ದಾರೆ ಎಂಬುದನ್ನು ವೀಕ್ಷಿಸಲು ಅವರನ್ನು Instagram ನಲ್ಲಿ ಅನುಸರಿಸಿ. ಸಂವಾದದಲ್ಲಿ ಸೇರ್ಪಡೆಗೊಳ್ಳಿ ಮತ್ತು ನೀವು ಅನ್ವೇಷಿಸುವ ವಿಷಯವನ್ನು ನೀವು ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಿದಾಗ ನೀವು ಇಷ್ಟಪಡುವುದನ್ನು ಹೆಚ್ಚು ವೀಕ್ಷಿಸಿ.
• Reels ನೊಂದಿಗೆ ಸೃಜನಶೀಲತೆಯನ್ನು ಮತ್ತು ಅಂತ್ಯವಿಲ್ಲದ ಮನರಂಜನೆಯನ್ನು ಅನ್‌ಲಾಕ್ ಮಾಡಿ
Instagram ನಲ್ಲಿನ ಸ್ನೇಹಿತರೊಂದಿಗೆ ಅಥವಾ ಯಾರೊಂದಿಗಾದರೂ ಶೇರ್ ಮಾಡಲು ಮೋಜಿನ, ಮನರಂಜನೆಯ ವೀಡಿಯೊಗಳನ್ನು ವೀಕ್ಷಿಸಿ ಮತ್ತು ಸುಲಭವಾಗಿ ರಚಿಸಿ. 90 ಸೆಕೆಂಡ್‌ಗಳವರೆಗಿನ ಬಹು-ಕ್ಲಿಪ್ ವೀಡಿಯೊಗಳನ್ನು ರಚಿಸಿ ಮತ್ತು ಬಳಸಲು ಸುಲಭವಾದ ಪಠ್ಯ, ಟೆಂಪ್ಲೇಟ್‌ಗಳು ಮತ್ತು ಸಂಗೀತದೊಂದಿಗೆ ಸೃಜನಶೀಲರಾಗಿ. ನಿಮ್ಮ ಗ್ಯಾಲರಿಯಿಂದಲೂ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ.
• ಸ್ಟೋರೀಸ್‌ನೊಂದಿಗೆ ನಿಮ್ಮ ದೈನಂದಿನ ಕ್ಷಣಗಳನ್ನು ಶೇರ್ ಮಾಡಿ
24 ಗಂಟೆಗಳ ನಂತರ ಕಣ್ಮರೆಯಾಗುವ ನಿಮ್ಮ ಸ್ಟೋರಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಿ ಮತ್ತು ಮೋಜಿನ ಸೃಜನಾತ್ಮಕ ಪರಿಕರಗಳೊಂದಿಗೆ ಅವುಗಳಿಗೆ ಜೀವ ತುಂಬಿರಿ. ನಿಮ್ಮ ಸ್ಟೋರಿಗೆ ಜೀವ ತುಂಬಲು ಪಠ್ಯ, ಸಂಗೀತ, ಸ್ಟಿಕ್ಕರ್‌ಗಳು ಮತ್ತು GIFಗಳನ್ನು ಬಳಸಿ. ಪ್ರಶ್ನೆಗಳು ಅಥವಾ ಜನಾಭಿಪ್ರಾಯ ಸಂಗ್ರಹ ಸ್ಟಿಕ್ಕರ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಸ್ಟೋರಿಯನ್ನು ಸ್ನೇಹಿತರು ಮತ್ತು ಅನುಸರಿಸುವವರಿಗಾಗಿ ಸಂವಹನಾತ್ಮಕಗೊಳಿಸಿ.
• Direct ನಲ್ಲಿ ನಿಮ್ಮ ಸ್ನೇಹಿತರಿಗೆ ಸಂದೇಶವನ್ನು ಕಳುಹಿಸಿ
ನೀವು Reels, ಫೀಡ್ ಮತ್ತು ಸ್ಟೋರೀಸ್‌ನಲ್ಲಿ ವೀಕ್ಷಿಸುವುದರ ಕುರಿತು ಸಂವಾದಗಳನ್ನು ಪ್ರಾರಂಭಿಸಿ. ನಿಮ್ಮ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸಿ, ಪೋಸ್ಟ್‌ಗಳನ್ನು ಖಾಸಗಿಯಾಗಿ ಶೇರ್ ಮಾಡಿ ಮತ್ತು ಚಾಟ್ ಅಧಿಸೂಚನೆಗಳನ್ನು ಸ್ವೀಕರಿಸಿ. ನೀವು ಎಲ್ಲೇ ಇದ್ದರೂ ವೀಡಿಯೊ ಮತ್ತು ಆಡಿಯೊ ಕರೆಗಳೊಂದಿಗೆ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ.
• ನೀವು ಇಷ್ಟಪಡುವ ವಿಷಯಗಳನ್ನು ಕಂಡುಕೊಳ್ಳಲು Instagram ನಲ್ಲಿ ಹುಡುಕಿ ಮತ್ತು ಅನ್ವೇಷಿಸಿ
ಹುಡುಕಾಟದ ಟ್ಯಾಬ್‌ನಲ್ಲಿ ನಿಮಗೆ ಆಸಕ್ತಿಯಿರುವುದನ್ನು ಹೆಚ್ಚು ವೀಕ್ಷಿಸಿ. ಆಸಕ್ತಿಕರ ಫೋಟೋಗಳು, ರೀಲ್‌ಗಳು, ಖಾತೆಗಳು ಮತ್ತು ಹೆಚ್ಚಿನದನ್ನು ಕಂಡುಕೊಳ್ಳಿ. ವಿಷಯಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಆಸಕ್ತಿಗಳಿಗೆ ಸಂಬಂಧಿತ ವಿಷಯ ಮತ್ತು ರಚನೆಕಾರರನ್ನು ಕಂಡುಕೊಳ್ಳಲು ಕೀವರ್ಡ್‌ಗಳ ಮೂಲಕ ಹುಡುಕಿ.
ಸ್ಥಾಪಿಸಿ ಕ್ಲಿಕ್ ಮಾಡುವ ಮೂಲಕ, ನೀವು ಬಳಕೆಯ ನಿಯಮಗಳು (https://help.instagram.com/581066165581870/) ಮತ್ತು ಗೌಪ್ಯತೆ ನೀತಿಗೆ ಸಮ್ಮತಿಸುತ್ತೀರಿ (https://help.instagram.com/519522125107875/).
ಅಪ್‌ಡೇಟ್ ದಿನಾಂಕ
ಏಪ್ರಿ 22, 2025